ಅಯ್ಯಾ, ನಿನ್ನನು ಕಾಯವಿಡಿದು
ಕಂಡು ಕೂಡೇನೆಂದರೆ ಕ್ರಿಯಕ್ಕಗಮ್ಯ ಕಾಣಾ.
ಅಯ್ಯಾ, ನಿನ್ನನು ಮನವಿಡಿದು ಕಂಡು ಕೂಡೇನೆಂದರೆ
ಜ್ಞಾನಗಮ್ಯ ಕಾಣಾ.
ಅಯ್ಯಾ, ನಿನ್ನನು ಭಾವವಿಡಿದು ಕಂಡು ಕೂಡೇನೆಂದರೆ
ಭಾವಕಗಮ್ಯ ಕಾಣಾ.
ಇವು ಯಾತಕ್ಕೂ ಸಿಕ್ಕಬಾರದಿರುವ ಶ್ರುತಿಗುರುಸ್ವಾನುಭಾವದಿಂದರಿದು
ಕಾಯ ಮನ ಭಾವವನರಿಯದೆ ಕಂಡು ಕೂಡಿ ಅಗಲಿಕೆಯನರಿಯದೆ
ಗುರುನಿರಂಜನ ಚನ್ನಬಸವಲಿಂಗದಲ್ಲಿ
ಪರಮಸುಖಿಯಾಗಿರ್ದೆನು.
Art
Manuscript
Music
Courtesy:
Transliteration
Ayyā, ninnanu kāyaviḍidu
kaṇḍu kūḍēnendare kriyakkagamya kāṇā.
Ayyā, ninnanu manaviḍidu kaṇḍu kūḍēnendare
jñānagamya kāṇā.
Ayyā, ninnanu bhāvaviḍidu kaṇḍu kūḍēnendare
bhāvakagamya kāṇā.
Ivu yātakkū sikkabāradiruva śrutigurusvānubhāvadindaridu
kāya mana bhāvavanariyade kaṇḍu kūḍi agalikeyanariyade
guruniran̄jana cannabasavaliṅgadalli
paramasukhiyāgirdenu.