Index   ವಚನ - 706    Search  
 
ಭುವನದ್ವ ತತ್ವದ್ವ ವರ್ಣದ್ವ ಮಂತ್ರದ್ವ ಕಲಾದ್ವ ಪದದ್ವ ನಿರಾಮಯ ನಿರುಪಮಾನಂದ ಸುಖಮಯ ಶರಣ ತಾನು ಸಾಧ್ಯಾಸಾಧ್ಯ ಗಮನಕ್ಕಗೋಚರನಾಗಿ, ಗಮನಾಗಮನ ಗರ್ಭಭರಿತ ಗಂಭೀರ ಗುಣಾರ್ಣವ ಪರಮಜ್ಯೋತಿರ್ಲಿಂಗವಾಗಿರ್ದನಲ್ಲದೆ ಪಂಚೇಂದ್ರಿಯವಿಷಯ ಗುಣಭರಿತನಾಗಿ ಬಲ್ಲಂತೆ ಭುಲ್ಲವಿಸಿ ಚರಿಸುತ್ತ ಅಲ್ಲಲ್ಲಿಗೊಂದೊಂದು ವ್ರತ ನಿಯಮಂಗಳ ಗಂಟಿಕ್ಕಿಕೊಂಡು ಬಲೆಯೊಳು ಬಿದ್ದು ಹೋಗುವ ಫಲಪಿಸುಣಿಗಳಂತಲ್ಲ ಕಾಣಾ. ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣನ ಪರಿ ಆರಿಗೆಯೂ ಕಾಣಬಾರದು.