Index   ವಚನ - 721    Search  
 
ಅಂಗ ಮನ ಪ್ರಾಣವನರಿಯದೆ ತನ್ನನಿತ್ತ ಸತ್ಯಶರಣರ ಕಳವಳಿಕೆಗೆ ಸಮವೆಂದು ಬೀರಿಕೊಳ್ಳುವ ಕಕ್ಕುಲಾತಿ ಡಂಭಕವೇಷಧಾರಿಗಳು ತಮ್ಮನರಿಯದೆ ತಾವು ಗುರುಲಿಂಗಜಂಗಮಕೊಕ್ಕುಮಿಕ್ಕಿ ಯೋಗ್ಯವೆಂಬ ಅಯೋಗ್ಯ ನುಡಿಗಳನೇನೆಂಬೆನಯ್ಯಾ? ಆ ಗುರುಲಿಂಗಜಂಗಮವು ಬಂದಲ್ಲಿ ಅರ್ಥ ಪ್ರಾಣ ಅಭಿಮಾನವಿಡಿದು ವಂಚನೆಯೊಳು ನಿಂದು ಮಾಡಿ ನೀಡಿ ಕಳುಹುವ ತ್ರಿವಿಧಗುರುದ್ರೋಹಿಗಳಿಗೆ ಸತ್ಕ್ರಿಯಾಚಾರವೆಲ್ಲಿಹದೊ! ಸತ್ಕ್ರಿಯಾಚಾರವಿಲ್ಲದ ತ್ರಿವಿಧಲಿಂಗದ್ರೋಹಿಗಳಿಗೆ ಸುಜ್ಞಾನ ಆಚಾರವೆಲ್ಲಿಹದೊ! ಸುಜ್ಞಾನ ಆಚಾರವಿಲ್ಲದ ತ್ರಿವಿಧಜಂಗಮದ್ರೋಹಿಗಳಿಗೆ ಸಮರಸಭಾವಾಚಾರವೆಲ್ಲಿಹದೊ! ಸಮರಸಭಾವಾಚಾರವಿಲ್ಲದ ತ್ರಿವಿಧಪ್ರಸಾದದ್ರೋಹಿಗಳಿಗೆ ಗುರುನಿರಂಜನ ಚನ್ನಬಸವಲಿಂಗವಾದ ನಿಜಪದವೆಲ್ಲಿಹದೊ!