Index   ವಚನ - 729    Search  
 
ಅಯ್ಯಾ, ಎನ್ನ ಕಾಯದ ಕರಸ್ಥಲದಲ್ಲಿ ಬಸವಣ್ಣನ ಪ್ರಸಾದವ ಕಂಡೆ. ಅಯ್ಯಾ, ಎನ್ನ ಮನದ ಕರಸ್ಥಲದಲ್ಲಿ ಚನ್ನಬಸವಣ್ಣನ ಪ್ರಸಾದವ ಕಂಡೆ. ಅಯ್ಯಾ, ಎನ್ನ ಭಾವದ ಕರಸ್ಥಲದಲ್ಲಿ ಪ್ರಭುದೇವರ ಪ್ರಸಾದವ ಕಂಡೆ. ಅಯ್ಯಾ, ಎನ್ನ ಸರ್ವಾಂಗದಲ್ಲಿ ಈ ತ್ರಿವಿಧ ಪ್ರಸಾದದ ಪರಿಣಾಮದಲ್ಲಿ ಓಲಾಡುತಿರ್ದೆನು ಗುರುನಿರಂಜನ ಚನ್ನಬಸವಲಿಂಗಾ.