Index   ವಚನ - 747    Search  
 
ಅಯ್ಯಾ, ಎನ್ನ ಕಾಯದಗತಿಯಿಂದೆ ನಿನ್ನ ಬೆಳಗನರಿದು ಕೂಡೇನೆಂದರೆ ಕ್ರಿಯಕ್ಕಗಮ್ಯ ಕಾಣಾ. ಅಯ್ಯಾ, ಎನ್ನ ಮನದ ಗತಿಯಿಂದೆ ನಿನ್ನ ಬೆಳಗನರಿದು ಕೂಡೇನೆಂದರೆ ಜ್ಞಾನಕ್ಕಗಮ್ಯ ಕಾಣಾ. ಅಯ್ಯಾ, ಎನ್ನ ಭಾವದ ಗತಿಯಿಂದೆ ನಿನ್ನ ಬೆಳಗನರಿದು ಕೂಡೇನೆಂದರೆ ಭಾವಕ್ಕಗಮ್ಯ ಕಾಣಾ. ಮತ್ತೆಂತೆಂದೊಡೆ, ಪ್ರಾಣವ ಕರಗಿ ಭಕ್ತಿರಸವೆರೆದು ಸ್ವಯವ ಮರೆದು ಪಟವ ಹರಿದು ನೆರೆದಲ್ಲಿ ನಿರುತವಾಗಿರ್ದ ನೀನೇ ಗುರುನಿರಂಜನ ಚನ್ನಬಸವಲಿಂಗಾ.