ಶ್ರುತಿಯ ನೋಡುವ ಮತಿಕುಶಲದನುವಿಂಗೆ
ನೆಗೆದುನೋಡಲೊಲ್ಲದೆನ್ನ ಭಾವ.
ಆಗಮವ ನೋಡುವ ಮತಿಕುಶಲದನುವಿಂಗೆ
ವಿಕಸನವಾಗಲೊಲ್ಲದೆನ್ನ ಮನ.
ಅಭ್ಯಾಸಿಗಳರಿವ ಮತಿಕುಶಲದನುವಿಂಗೆ
ಸೊಗಸನೆತ್ತಲೊಲ್ಲದೆನ್ನ ತನು.
ಅದೇನು ಕಾರಣವೆಂದೊಡೆ, ಬಸವ ಚನ್ನಬಸವ ಪ್ರಭುಗಳ
ವಚನಾನುಭಾವದ ಪರಮಪ್ರಕಾಶ
ಎನ್ನೊಳಹೊರಗೆ ಪರಿಪೂರ್ಣಾನಂದ ತಾನೆಯಾಗಿಪ್ಪುದಾಗಿ,
ಮತ್ತೊಂದನರಿಯಲರಿಯದ ಭಾವವನೇನೆಂದರಿಯದಿರ್ದೆ
ಗುರುನಿರಂಜನ ಚನ್ನಬಸವಲಿಂಗ ಸಾಕ್ಷಿಯಾಗಿ.
Art
Manuscript
Music
Courtesy:
Transliteration
Śrutiya nōḍuva matikuśaladanuviṅge
negedunōḍalolladenna bhāva.
Āgamava nōḍuva matikuśaladanuviṅge
vikasanavāgalolladenna mana.
Abhyāsigaḷariva matikuśaladanuviṅge
sogasanettalolladenna tanu.
Adēnu kāraṇavendoḍe, basava cannabasava prabhugaḷa
vacanānubhāvada paramaprakāśa
ennoḷahorage paripūrṇānanda tāneyāgippudāgi,
mattondanariyalariyada bhāvavanēnendariyadirde
guruniran̄jana cannabasavaliṅga sākṣiyāgi.
ಸ್ಥಲ -
ಶರಣನ ಪ್ರಾಣಲಿಂಗಿಸ್ಥಲ