Index   ವಚನ - 776    Search  
 
ಸಂಸಾರವ ಹೊರಗಿಟ್ಟು ಅಂಗವನೊಳಗಿಟ್ಟು ನಡೆನುಡಿಯೊಳನುಭಾವ ಸಚ್ಚರಿತ ಶರಣ ಎಂತಿರ್ದಂತೆ ಪರಿಣಾಮಿ. ಇಹಪರವರಿಯದನುಪಮನನಾರು ತಿಳಿವರು. ದ್ವಂದ್ವಕರ್ಮದ ದಂದುಗವ ಹೊದ್ದದಪ್ರತಿಮನು ಗುರುನಿರಂಜನ ಚನ್ನಬಸವಲಿಂಗದಲ್ಲಿ ಅಡಗಿರ್ದನು.