Index   ವಚನ - 775    Search  
 
ಮುಟ್ಟು ತಟ್ಟು ಮುದ್ದು ಆಲಿಂಗನವೆಂಬ ಕಾಯರತಿಯು ಇಷ್ಟಲಿಂಗದಲ್ಲಿ ತರಹರವಾಗಿ, ನೆನಹು ನೀರಿಕ್ಷಣ ಮೋಹ ಕಳೆಯೆಂಬ ಮನದರತಿ ಪ್ರಾಣಲಿಂಗದಲ್ಲಿ ತರಹರವಾಗಿ, ಹರುಷ ಸುಖ ಸಮರಸ ಪರವಶವೆಂಬ ಭಾವದರತಿ ಮಹಾಲಿಂಗದಲ್ಲಿ ತರಹರವಾಗಿ ಸುಳಿವ ಶರಣ ಎಂತಿರ್ದಂತೆ ಪರಶಿವಲಿಂಗ ತಾನೇ ಕಾಣಾ. ಈ ದ್ವಾದಶರತಿಯ ಮಲತ್ರಯದಲ್ಲಿ ಹುದುಗಿಸಿ ನಿರ್ಮಲಶರಣರಿಂದು ನುಡಿದು ನಡೆದು ಹೋದರೆ ಬಚ್ಚಲದಲ್ಲಿಯ ಹುಳ ಬಾಳಿ ಮಡಿದಂತೆ ಕಾಣಾ ಗುರುನಿರಂಜನ ಚನ್ನಬಸವಲಿಂಗಾ.