Index   ವಚನ - 799    Search  
 
ಅಯ್ಯಾ, ತಾನೇ ತನ್ನವಿನೋದಕ್ಕೆ ತಂದು, ತನ್ನಿಂದೆ ತನ್ನನಾರಾಧನೆಯ ಮಾಡಿ, ಮರೆಯಾಗಿ ಮಾಜುವ ಮಹಾಂತರ ಕಂಡು, ಮನವೊಂದುಕಡೆಗೆ ತನುವೊಂದುಕಡೆಗೆ ನುಡಿಯೊಂದುಕಡೆಗೆ ಮಾಡಿ ವಂದನೆ ನಿಂದನೆಗಳ ನೆರೆದು ನಡೆವ ಪಶುಪ್ರಾಣಿಗಳಿಗೆ ಕುಂಭಿನೀ ನಾಯಕನರಕ ಕಡೆಗಿಂಬು ಕಾಣಾ ಗುರುನಿರಂಜನ ಚನ್ನಬಸವಲಿಂಗಾ.