Index   ವಚನ - 823    Search  
 
ಸ್ಥೂಲತನುವಿನ ಜಾಗ್ರಾವಸ್ಥೆಯ ಸಂಸಾರಸಾಗರದಲ್ಲಿ ಮುಳುಗಿಪ್ಪ ಪ್ರಾಣಿಗಳು ತಾವು ಇಷ್ಟಲಿಂಗೈಕ್ಯವತ್ತ ಬಲ್ಲರು ಹೇಳಾ! ಸೂಕ್ಷ್ಮ ತನುವಿನ ಸ್ವಪ್ನಾವಸ್ಥೆಯ ಮಾಯಾಮೋಹದಲ್ಲಿ ಮುಳುಗಿಪ್ಪ ಮನುಜರು ತಾವು ಪ್ರಾಣಲಿಂಗೈಕ್ಯವನೆತ್ತ ಬಲ್ಲರು ಹೇಳಾ! ಕಾರಣತನುವಿನ ಸುಷುಪ್ತಾವಸ್ಥೆ ತಾಮಸ ಭ್ರಾಂತಿಯಲ್ಲಿ ಮುಳುಗಿಪ್ಪ ಆತ್ಮರು ತಾವು ಭಾವಲಿಂಗೈಕ್ಯವನೆತ್ತ ಬಲ್ಲರು ಹೇಳಾ! ಅವಸ್ಥಾತ್ರಯದಲ್ಲಿ ಜೀವನತ್ರಯದಿಂದೆ ವರ್ತಿಸುವ ಲೌಕಿಕರಿಗೆ ಏಕೈಕ್ಯದ ಹೊಲಬು ಎಂದಿಗೂ ಇಲ್ಲ ಕಾಣಾ ಗುರುನಿರಂಜನ ಚನ್ನಬಸವಲಿಂಗಾ.