Index   ವಚನ - 860    Search  
 
ಕಲ್ಯಾಣದೊಳಗುಳ್ಳ ಎಲ್ಲ ಪುರಾತನರು ಕೂಡಿ ಬಸವಣ್ಣನ ಮನೆಗೆ ಹೋಗಿ ಶರಣು ಶರಣೆನ್ನ ಮರೆದೆ. ಚನ್ನಬಸವಣ್ಣನ ಮನೆಗೆ ಹೋಗಿ ಶರಣು ಶರಣೆನ್ನ ಮರೆದೆ. ಪ್ರಭುದೇವರ ಮನೆಗೆ ಹೋಗಿ ಶರಣು ಶರಣೆನ್ನ ಮರೆದೆ ಇದು ಕಾರಣ ಗುರುನಿರಂಜನ ಚನ್ನಬಸವಲಿಂಗದಲ್ಲಿ ನಿಂದು ಕೋಟಿ ಶರಣು ಶರಣೆನ್ನ ಮರೆದು ಪರವಶದೊಳು ಮುಳುಗಿರ್ದೆನು.