Index   ವಚನ - 861    Search  
 
ಅಯ್ಯಾ, ನಾನು ಆಚಾರಲಿಂಗಜಂಗಮಕ್ಕೆ ಅಷ್ಟವಿಧಾರ್ಚನೆಯಿಂದ ಅರ್ಚಿಸುವೆನೆ? ಭಕ್ತಸ್ಥಲ ಎನಗಿಲ್ಲವಯ್ಯಾ. ಗುರುಲಿಂಗಜಂಗಮಕ್ಕೆ ಅಷ್ಟವಿಧಾರ್ಚನೆಯಿಂದ ಅರ್ಚಿಸುವೆನೆ? ಮಹೇಶ್ವರಸ್ಥಲವೆನಗಿಲ್ಲವಯ್ಯಾ. ಶಿವಲಿಂಗಜಂಗಮಕ್ಕೆ ಅಷ್ಟವಿಧಾರ್ಚನೆಯಿಂದ ಅರ್ಚಿಸುವೆನೆ? ಪ್ರಸಾದಿಸ್ಥಲವೆನಗಿಲ್ಲವಯ್ಯಾ. ಜಂಗಮಲಿಂಗಜಂಗಮಕ್ಕೆ ಅಷ್ಟವಿಧಾರ್ಚನೆಯಿಂದ ಅರ್ಚಿಸುವೆನೆ? ಪ್ರಾಣಲಿಂಗಿಸ್ಥಲವೆನಗಿಲ್ಲವಯ್ಯಾ. ಪ್ರಸಾದಲಿಂಗಜಂಗಮಕ್ಕೆ ಅಷ್ಟವಿಧಾರ್ಚನೆಯಿಂದ ಅರ್ಚಿಸುವೆನೆ? ಶರಣಸ್ಥಲವೆನಗಿಲ್ಲವಯ್ಯಾ. ಇಂತು ಪಂಚಸ್ಥಲವನೊಳಗೊಂಡಿಪ್ಪ ಐಕ್ಯಸ್ಥಲದಲ್ಲಿ ನಿಂದು ಪಂಚಲಿಂಗವನೊಳಗೊಂಡಿಪ್ಪ ಮಹಾಲಿಂಗಜಂಗಮಕ್ಕೆ ಅಷ್ಟವಿಧಾರ್ಚನೆಯೊಳ್ವೆರೆದು ಮಾಡದ ಮುನ್ನವೇ ಗುರುನಿರಂಜನ ಚನ್ನಬಸವಲಿಂಗಾ ನಿಮ್ಮೊಳೈಕ್ಯ.