ಒಳಗಿಲ್ಲದ ಹೊರಗಿಲ್ಲದ ತೆರಹಿಲ್ಲದ ಪರಿಪೂರ್ಣಲಿಂಗಕ್ಕೆ
ಮಾಡಿ ಕೆಟ್ಟರು ಮನಮುಖಹಿರಿಯರು,
ನೀಡಿ ಕೆಟ್ಟರು ತನುಮುಖಹಿರಿಯರು,
ಕೂಡಿ ಕೆಟ್ಟರು ಭಾವಮುಖಹಿರಿಯರು,
ಇದನರಿದು ನಾನು ಮಾಡದೆ ನೀಡದೆ ಕೂಡದೆ
ಮಾಡಿ ಭವಗೆಟ್ಟೆ, ನೀಡಿ ನಿರ್ಮಲವಾದೆ, ಕೂಡಿ ನಾನು ಕೆಟ್ಟೆ,
ನಿನ್ನನರಿಯದಿರ್ದೆ ಕಾಣಾ ಗುರುನಿರಂಜನ
ಚನ್ನಬಸವಲಿಂಗಾ.