ಅಯ್ಯಾ, ನಿಮಗೆ ಶರಣುಮಾಡುವೆನೆಂದರೆ
ಬಿಂದುವಿನ ಸುಳುಹಿಲ್ಲ ಕಾಣಾ.
ಅಯ್ಯಾ, ನಿಮಗೆ ಶರಣುಮಾಡುವೆನೆಂದರೆ
ನಾದದ ಸುಳುಹಿಲ್ಲ ಕಾಣಾ.
ಅಯ್ಯಾ, ನಿಮಗೆ ಶರಣುಮಾಡುವೆನೆಂದರೆ
ಕಳೆಯ ಸುಳುಹಿಲ್ಲ ಕಾಣಾ.
ಅದೇನು ಕಾರಣವೆಂದಡೆ, ನಾದ ಬಿಂದು ಕಳೆ
ಶಿವಕಳೆಯೊಳು ಬೆರೆದಿರ್ದವಾಗಿ.
ಎನ್ನ ನಡೆ ನುಡಿ ನಿಮ್ಮೊಳಗೆ ಅಡಗಿರ್ದವು ಕಾಣಾ
ಗುರುನಿರಂಜನ ಚನ್ನ ಬಸವಲಿಂಗಾ.
Art
Manuscript
Music
Courtesy:
Transliteration
Ayyā, nimage śaraṇumāḍuvenendare
binduvina suḷuhilla kāṇā.
Ayyā, nimage śaraṇumāḍuvenendare
nādada suḷuhilla kāṇā.
Ayyā, nimage śaraṇumāḍuvenendare
kaḷeya suḷuhilla kāṇā.
Adēnu kāraṇavendaḍe, nāda bindu kaḷe
śivakaḷeyoḷu beredirdavāgi.
Enna naḍe nuḍi nim'moḷage aḍagirdavu kāṇā
guruniran̄jana canna basavaliṅgā.