Index   ವಚನ - 869    Search  
 
ನಾದ ಬಿಂದು ಕಲಾತೀತ ನಿರವಯಾನಂದ ನಿಜಬ್ರಹ್ಮವೇ ತಾವೆಂದು ನುಡಿದುಕೊಂಡು ಪರಧನಕ್ಕೆ ಆಶೆಯನಿಕ್ಕಿ, ಪರವಧುವಿಗೆ ಮನವನಿಕ್ಕಿ, ಪರದೈವಕ್ಕೆ ಶಿರವ ಚಾಚುವ ನಿರವಯಕ್ಕೆ ನಿರಂತರವಾದ ಮಾಯಾ ನಿರ್ಮಾಲ್ಯರಿಗೆ ನಿಜಗುರುನಿರಂಜನ ಚನ್ನಬಸವಲಿಂಗದಲ್ಲಿ ನಿರ್ವಯಲ ನಿಜಸಮಾಧಿಯು ಎಂದೆಂದಿಗೆ ಎತ್ತಲೂ ಹೇಳಾ.