ಕೂಟವನರಿಯದೆ ಕೋಟಲೆಗೊಂಡಿತ್ತು ಲೋಕವೆಲ್ಲ.
ಹಾದಿಯೆರಡರಲ್ಲಿ ನಡೆವ ಕುಂಟ
ಕುರುಡರು ತಂಟಕರಾಗಿ ಹೋಗಿಬರುವರು.
ಸಾಧಕ ಸಂದಣಿಗಳೆಲ್ಲ ಮೇದಿನಿಯೊಳುಳಿದರು.
ಹಿರಿಯ ಕಿರಿಯರೆನಿಸುವರೆಲ್ಲ ಬಲೆಯೊಳು ಸಿಲುಕಿದರು.
ಉಳಿದವರಂತಿರಲಿ, ಇದನರಿದು
ನಾನು ಮಾಟವ ಮರೆದು ಕೂಟವ ಕಂಡು
ಕಾಣದೆ ಸಮರಸಾನಂದದೊಳಿರ್ದೆನು
ಗುರುನಿರಂಜನ ಚನ್ನಬಸವಲಿಂಗದೊಳಗೆ.
Art
Manuscript
Music
Courtesy:
Transliteration
Kūṭavanariyade kōṭalegoṇḍittu lōkavella.
Hādiyeraḍaralli naḍeva kuṇṭa
kuruḍaru taṇṭakarāgi hōgibaruvaru.
Sādhaka sandaṇigaḷella mēdiniyoḷuḷidaru.
Hiriya kiriyarenisuvarella baleyoḷu silukidaru.
Uḷidavarantirali, idanaridu
nānu māṭava maredu kūṭava kaṇḍu
kāṇade samarasānandadoḷirdenu
guruniran̄jana cannabasavaliṅgadoḷage.
ಸ್ಥಲ -
ಐಕ್ಯನ ಮಾಹೇಶ್ವರಸ್ಥಲ