Index   ವಚನ - 872    Search  
 
ಲಿಂಗದಲ್ಲಿ ನಿಷ್ಠೆ ನಿಬ್ಬೆರಸಿದ ನಿಜೈಕ್ಯಂಗೆ ತೋರುವವೇ ಅರಿಷಡ್ವರ್ಗಂಗಳು? ತೋರುವವೇ ಷಡೂರ್ಮಿಗಳು? ತೋರುವವೇ ಕುಲಾದಿ ಮದಂಗಳು? ಸಾರಿಪ್ಪವೇ ಇಂದ್ರಿಯ ವಿಷಯ ರಚನೆಗಳು? ಮೀರಿಪ್ಪವೇ ಮನಾದಿ ಕರಣವೃಂದಕಲೆತು? ಗುರುನಿರಂಜನ ಚನ್ನಬಸವಲಿಂಗದಲ್ಲಿ ಅರತು ನಿಜವಾಗಿರ್ದುವು ಕಾಣಾ.