Index   ವಚನ - 873    Search  
 
ಗುಣಯುಕ್ತನಾಗಿ ಗಣಸಮ್ಮೇಳ ಸಂಯೋಗಿಯೆಂದಡೆ ಅಣಕವಾಯಿತ್ತು ನಿನ್ನ ಜನ್ಮ ಅವನಿಯೊಳಗೆ. ಬಿಡು ಹಿಡಿದುನಡೆ ಎಡಬಲನುರುಹಿ ಹೆಜ್ಜೆದಪ್ಪಿ ಹೆಜ್ಜೆಹಿಡಿದು ಮಡಿದರೆ ಅದೇ ಮಹಾಲಿಂಗೈಕ್ಯ ಗುರುನಿರಂಜನ ಚನ್ನಬಸವಲಿಂಗ ಶರಣರಲ್ಲಿ.