Index   ವಚನ - 891    Search  
 
ಗುರುಲಿಂಗ ಜಂಗಮಕ್ಕೊಕ್ಕುಮಿಕ್ಕಿದುದಕ್ಕೆ ಯೋಗ್ಯವೆಂದು ಬೀರಿಕೊಳ್ಳುವ ಕಕ್ಕುಲಾತಿ ಡಂಭಕ ವೇಷಧಾರಿಗಳನೇನೆಂಬೆನಯ್ಯಾ! ಆ ಗುರುಲಿಂಗಜಂಗಮ ಬಂದಲ್ಲಿ, ಅರ್ಥ ಪ್ರಾಣ ಅಭಿಮಾನವಿಡಿದು ವಂಚನೆಯೊಳ್ನಿಂದು ಮಾಡಿ ನೀಡಿ ಕೊಂಡು ಕಳುಹಿಸುವ ತ್ರಿವಿಧಗುರುದ್ರೋಹಿಗಳಿಗೆ ಸತ್ಕ್ರಿಯಾಚಾರವೆಲ್ಲಿಹದೊ! ಸತ್ಕ್ರಿಯಾಚಾರವಿಲ್ಲದ ತ್ರಿವಿಧಲಿಂಗದ್ರೋಹಿಗಳಿಗೆ ಸುಜ್ಞಾನಾಚಾರವೆಲ್ಲಿಹದೊ! ಸುಜ್ಞಾನಾಚಾರವಿಲ್ಲದ ತ್ರಿವಿಧ ಜಂಗಮದ್ರೋಹಿಗಳಿಗೆ ಸಮರಸಭಾವಾಚಾರವೆಲ್ಲಿಹದೊ! ಗುರುನಿರಂಜನ ಚನ್ನಬಸವಲಿಂಗದಲ್ಲಿ ಐಕ್ಯಪದವೆಲ್ಲಿಹದೊ!