Index   ವಚನ - 931    Search  
 
ಆಟವಳಿದು ಆರೂಢವಾಯಿತ್ತು, ನೋಟಕರು ಸತ್ತರು ಮಾಟಕರು ಮಡಿದರು. ಕೂಟಕರು ಕುರುಹಳಿದರು, ನೋಡಲಿಲ್ಲ ನುಡಿಸಲಿಲ್ಲ ಕೇಳಲಿಲ್ಲ. ಗುರುನಿರಂಜನ ಚನ್ನಬಸವಲಿಂಗವಾಗಿ ನಿರ್ವಯಲಾದುದನೇನೆಂಬೆನಯ್ಯಾ.