Index   ವಚನ - 934    Search  
 
ಅದ್ವೈತವನಳಿದುಳಿದ ಕುರುಹು ನಾಶವಾಯಿತ್ತು. ದ್ವೈತವನಳಿದುಳಿದ ಕುರುಹು ನಷ್ಟವಾಯಿತ್ತು. ಯೋಗಗತಿಯನಳಿದುಳಿದ ಕುರುಹು ಲಯವಾಯಿತ್ತು. ಗುರುನಿರಂಜನ ಚನ್ನಬಸವಲಿಂಗ ತಾನೆಯಾಗಿ ಬಯಲಗೊಂಡಿತ್ತು.