Index   ವಚನ - 935    Search  
 
ತಾನೇ ತನ್ನ ಲೀಲೆಯಿಂದೆ ಒಂದು ಎರಡಾಗಿ, ಮೂರು ಮೂರಾಗಿ, ಆರು ಆರಾಗಿ, ಮೂವತ್ತಾರು ಮೂವತ್ತಾರಾಗಿ, ಇನ್ನೂರ ಹದಿನಾರು ಇನ್ನೂರ ಹದಿನಾರಾಗಿ, ವಿಶ್ವಪರಿಪೂರ್ಣವಾಗಿ ತನ್ನ ತಾನೇ ಇನ್ನೂರಹದಿನಾರು ಇನ್ನೂರಹದಿನಾರಾಗಿ ಮತ್ತೆ ಮೂವತ್ತಾರು ಮೂವತ್ತಾರಾಗಿ, ಮತ್ತೆ ಆರು ಆರಾಗಿ, ಮತ್ತೆ ಮೂರು ಮೂರಾಗಿ, ಮತ್ತೆ ಒಂದೊಂದಾಗಿ, ಮತ್ತೆ ಗುರುನಿರಂಜನ ಚನ್ನಬಸವಲಿಂಗವಾಗಿ ನಿರ್ವಯಲಾದುದು, ಇದೇ ಒಂದಾಶ್ಚರ್ಯ. ಇದನುಳಿದು ಆಶ್ಚರ್ಯವೆಂಬುದು ಅಶುದ್ಧವಾಕು ಕಾಣಾ.