Index   ವಚನ - 956    Search  
 
ಕೂಸುಳ್ಳ ವೇಶ್ಯೆ ಕಾಸಿನಾಸೆಗೆ ಕಾಮನಕೇಳಿಗೆ ವಿಟನಿಗೆ ನಿಂದಲ್ಲಿ ಸಕಲ ವಿಭ್ರಮದ ಬೆಡಗು ಮೂರುಭಾಗವಾಗಿಪ್ಪುದು. ಭುಜಂಗನ ರತಿಗೆ ರತಿತಪ್ಪಿದ ರತಿಗೆ ಹಿತವಪ್ಪಲರಿಯದು. ವ್ರತಗೇಡಿಗೆ ಸತ್ಯವಹುದೆ? ಈ ಪರಿವಿಡಿದಾಡುವ ಮಾಟ ಕೋಟಲೆಗೆ ನೀಟು ಮನದೊಡೆಯ ಗುರುನಿರಂಜನ ಚನ್ನಬಸವಲಿಂಗ ಸಾಕ್ಷಿ ತಮ್ಮ ತಮ್ಮ ಭಕ್ತಿಬೇಟಕ್ಕೆ.