ಎರಡು ಕಾಲಿನಿಂದೆ ನಡೆವಾತ ಭಕ್ತನಲ್ಲ
ಎರಡು ಕಣ್ಣಿನಿಂದೆ ನೋಡುವಾತ ಭಕ್ತನಲ್ಲ.
ಎರಡು ಕೈಯಿಂದೆ ಹಿಡಿವಾತ ಭಕ್ತನಲ್ಲ
ಜಿಹ್ವೆ ರಸನೆಯಿಂದೆ ನುಡಿವಾತ ಭಕ್ತನಲ್ಲ.
ಎರಡು ಕಿವಿಯಿಂದೆ ಕೇಳುವಾತ ಭಕ್ತನಲ್ಲ
ಹೊರಗೊಳಗೆ ಗುರುನಿರಂಜನ
ಚನ್ನಬಸವಲಿಂಗ ಸಮ್ಮುಖವಾಗಿ
ಮಾಡುವಾತ ಭಕ್ತನಲ್ಲ.
Art
Manuscript
Music
Courtesy:
Transliteration
Eraḍu kālininde naḍevāta bhaktanalla
eraḍu kaṇṇininde nōḍuvāta bhaktanalla.
Eraḍu kaiyinde hiḍivāta bhaktanalla
jihve rasaneyinde nuḍivāta bhaktanalla.
Eraḍu kiviyinde kēḷuvāta bhaktanalla
horagoḷage guruniran̄jana
cannabasavaliṅga sam'mukhavāgi
māḍuvāta bhaktanalla.
ಸ್ಥಲ -
ಪರಿಶಿಷ್ಟ
ಭಕ್ತಸ್ಥಲದ ಉಳಿದ ವಚನಗಳು