ಪದ್ಮಾಸನದಲ್ಲಿ ಕುಳ್ಳಿರ್ದು,
ಕುಂಡಲಿಯ ಸ್ಥಾನವನರಿದು,
ಅಂಡಲೆವ ಅಧೋವಾಯುವ
ಊರ್ಧ್ವಮುಖವ ಮಾಡಿ
ಷಡಂಗುಲವನೊತ್ತಿ ಊರ್ಧ್ವ
ವಾಯುವನಧೋಮುಖಕ್ಕೆ ತಂದು
ಉತ್ತರಪೂರ್ವದಕ್ಷಿಣವನತಿಗಳೆದು
ಪಶ್ಚಿಮದ ಸುಷುಮ್ನೆಯಲ್ಲಿ
ಮನಶ್ಶಕ್ತಿಸಂಧಾನಸಂಯೋಗದಿಂದ
ಸಹಸ್ರದಳಕಮಲದಲ್ಲಿ ನಾದಬ್ರಹ್ಮವನೆಯ್ದಿ,
ಮಹಾವಾಸನಾಮೃತವ ದಣಿಯುಂಡು
ತ್ರಿಸಂಧಾನ ಒಂದಾದ ಬಳಿಕ-ಆತ್ಮ ಪರಮಾತ್ಮ ಇಂತಾಗಿ,
ಅಂತರಾತ್ಮ ವಿಚಾರಕ್ಕೆ ಇಳಿದಲ್ಲಿ
ಅಭ್ಯಾಸಕ್ಕೆ ಬರಲಾಗದು, ಅದೆಂತೆಂದಡೆ:
ದೇವಲೋಕಕ್ಕೆ ಸಂದು ಮರಳಿ
ಮಾನವನಪ್ಪಡೆ ಅದೇ ಪಾತಕ
ಹಸಿದವನಮೃತವನುಂಡು,
ಮರಳಿ ಹಸಿದು, ಉಂಡಿಹೆನೆಂದಡೆ ಅದೇ ಪ್ರಕೃತಿ ಗುಣ.
ಇದು ಕಾರಣ, ಪರಮಾತ್ಮ ತಾನಾದಾತನು,
ಪರಮಾತ್ಮ ತಾನಾದನಾಗಿ
ತನ್ನಲ್ಲಿ ತಾನೆ ಏಕೀ ಭವಿಸಿರಬೇಕು,
ಗುಹೇಶ್ವರಾ.
Transliteration Padmāsanadalli kuḷḷirdu, kuṇḍaliya sthānavanaridu,
aṇḍaleva adhōvāyuva ūdhrvamukhava māḍi
ṣaḍaṅgulavanotti ūdhrvavāyuvanadhōmukhakke tandu
uttarapūrvadakṣiṇavanatigaḷedu
paścimada suṣumneyalli manaśśaktisandhānasanyōgadinda
sahasradaḷakamaladalli nādabrahmavaneydi,
mahāvāsanāmr̥tava daṇiyuṇḍu
trisandhāna ondāda baḷika -ātma paramātma intāgi,
antarātma vicārakke iḷidalli abhyāsakke baralāgadu.
Adentendaḍe:Dēvalōkakke sandu maraḷi mānavanappaḍe adē pātaka
hasidavanamr̥tavanuṇḍu,
maraḷi hasidu, uṇḍ'̔ihenendaḍe adē prakr̥ti guṇa.
Idu kāraṇa -paramātma tānādātanu, paramātma tānādanāgi
tannalli tāne ēkī bhavisirabēku, guhēśvarā.
Hindi Translation पद्मासन में बैठे, कुंडली स्थान जानकर,
बेकार घूमते अधोवायु को ऊर्ध्व मुख बनाकर
षडंगुल दबाये ऊर्ध्ववायु को अधोमुख लाकर
उत्तर पूर्व दक्षिण तिरस्कार कर
पश्चिम की सुषुम्ना में मनशक्ति संधान संयोग से
सहस्त्र दल कमल में नादब्रह्म से मिले,
महावासनामृत भरपेठ खाकर,
त्रिसंधान एक होने के बाद- आत्मा परमात्मा ऐसे होकर,
अंतरात्मा के विचार में उतरे तो अभ्यास में न आना।
वह कैसे कहें तो - देवलोक पहुंचकर फिर मानव हो तो वहीं पातक
भूखे अमृत खाये,
फिर भूखे, खाये कहें तो वही प्रकृति गुण।
इस कारण-परमात्मा खुद हुआ, परमात्मा खुद बने,
अपने आप एक ही भाव होना चाहिए गुहेश्वरा।
Translated by: Eswara Sharma M and Govindarao B N