ಅರಸಿಕೊಂಡಾಗಿ ಬಂದಲ್ಲಿ ಅರಿದರಿದು ಮಾಡಬೇಕು
ಕಾಯದ ಕ್ರಿಯೆಯಿಂದ
ಅರಿದರಿದು ಮಾಡಬೇಕು ಮನದ ಕ್ರಿಯೆಯಿಂದ,
ಅರಿದರಿದು ಮಾಡಬೇಕು ಭಾವದ ಕ್ರಿಯೆಯಿಂದ.
ಗುಣ ತ್ರಿವಿಧ ಈ ಭೇದವನರಿಯದೆ
ಒಂದು ಕುರುಹಿಂದೆ ಜರಿದು ಲಿಂಗದಲ್ಲುಂಟೆಂದು
ಗುರುವನುಳಿದು ಪರಿಪರಿಯ ಸೊಬಗನೋಲೈಸಿದರೇನು?
ಬೇರುಕಿತ್ತೊಗೆದ ಮರದಂತೆ ಮುಂದೆಯಿಲ್ಲದೆ ವೃರ್ಥವಾಗುವದು.
ಕೆಟ್ಟುಬೀಳುವ ಸಂಗವನು ಬಿಟ್ಟುಕಳೆಯುವುದೇ ಸ್ಥಲ ಕಾಣಾ
ಗುರುನಿರಂಜನ ಚನ್ನಬಸವಲಿಂಗಾ.
Art
Manuscript
Music
Courtesy:
Transliteration
Arasikoṇḍāgi bandalli aridaridu māḍabēku
kāyada kriyeyinda
aridaridu māḍabēku manada kriyeyinda,
aridaridu māḍabēku bhāvada kriyeyinda.
Guṇa trividha ī bhēdavanariyade
ondu kuruhinde jaridu liṅgadalluṇṭendu
guruvanuḷidu paripariya sobaganōlaisidarēnu?
Bērukittogeda maradante mundeyillade vr̥rthavāguvadu.
Keṭṭubīḷuva saṅgavanu biṭṭukaḷeyuvudē sthala kāṇā
guruniran̄jana cannabasavaliṅgā.
ಸ್ಥಲ -
ಭಕ್ತಿತಾಮಸ ನಿರಸನಸ್ಥಲದ
ಉಳಿದ ವಚನಗಳು