Index   ವಚನ - 974    Search  
 
ಕ್ರಿಯಾಘನಗುರುವಿರ್ದಂತೆ ದರ್ಶನ ಸ್ಪರ್ಶನ ಸಂಭಾಷಣೆಯೆಂಬ ಸತ್ಪ್ರ್ಮೇಮ ಪ್ರಸಾದವ ಸಮವೇಧಿಸಿಕೊಂಡಾಚರಿಸುವುದೇ ಸರ್ವಜ್ಞತ್ವ. ನಿಜಾನಂದಪರಿಪೂರ್ಣತ್ವ ನಿತ್ಯತೃಪ್ತತ್ವ ಮತ್ತೆಂತೆಂದೊಡೆ, ಗ್ರಾಮೊಂದರಲ್ಲಿರ್ದಡೆ ತ್ರಿಕಾಲದಲ್ಲಿ ಕಂಡು ಬದುಕುವುದು. ಗಾವುದದಾರಿಯ ಗ್ರಾಮದಲ್ಲಿರ್ದಡೆ ಎಂಟುದಿವಸಕೊಂದುವೇಳೆ ಕಂಡು ಬದುಕುವುದು. ಮೂಗಾವುದ ದೂರದಲ್ಲಿರ್ದಡೆ ಮಾಸಕ್ಕೊಮ್ಮೆ ಕಂಡು ಬದುಕುವುದು. ಹನ್ನೆರಡುಗಾವುದ ಮೇಲೆಯಿರ್ದಡೆ ಆರುಮಾಸಕ್ಕೊಮ್ಮೆ ಕಂಡು ಬದುಕುವುದು. ಎತ್ತಣಾಗಿ ದೂರದಿಂದಿರ್ದಡೆ ವರುಷಕೊಂದುವೇಳೆ ಕಂಡು ಬದುಕುವುದು. ತಪ್ಪಲಾಗದು,ಮತ್ತೆ ತಪ್ಪಿದರೆ ಗುರುದ್ರೋಹ. ಗುರುದ್ರೋಹಿಯಾದಲ್ಲಿ ಲಿಂಗ ಜಂಗಮ ಪಾದೋದಕ ಪ್ರಸಾದ ವಿಭೂತಿ ರುದ್ರಾಕ್ಷಿ ಪಂಚಾಕ್ಷರಿದ್ರೋಹವೆಡೆಗೊಂಬುವುದು. ಇಂತು ಅಷ್ಟಾವರಣದ್ರೋಹಿಗೆ ನಿರಂತರ ಹಿರಿಯ ನರಕ ತಪ್ಪದು. ಇದಕ್ಕೆ ನೀವೇ ಸಾಕ್ಷಿ ಗುರುನಿರಂಜನ ಚನ್ನಬಸವಲಿಂಗಾ.