ಹರಮುನಿದರೆ ಗುರುಕಾಯುವ
ಗುರುಮುನಿದರೆ ಹರಕಾಯನೆಂಬ
ಮಹಾವಾಕ್ಯವನು ಕೇಳಿ ಕಂಡರಿದ ಹೃದಯವು
ದುರಾಗ್ನಿಯಿಂದೆ ನಾಶವಾಯಿತ್ತೆ?
ಛೀ ಅದೇತರ ಬಾಳುವೆ.
ಗುರುವ ಮರೆದು ಲಿಂಗವನೊಲಿಸುವೆನೆಂದರೆ
ಎಂದಿಗೂ ಆಗಬಾರದು.
ಛೀ ಗುರುಮಾರ್ಗವೇ ಮಾರ್ಗ,
ಛೀ ಗುರುಜ್ಞಾನವೇ ಜ್ಞಾನ,
ಛೀ ಗುರು ಪರಿಣಾಮವೇ ಪರಿಣಾಮ.
ಅದು ಕಾರಣ ಜಡಮೂಢ ಪ್ರಾಣಿಗಳಿರಾ,
ಕರ್ಕಸಮಥನ ಕಡಲೊಳು ಮುಳುಗಿ ಹೋಗುವದಕಿಂತವೆ
ಗುರುಕೃಪಾಂಬುಧಿಯೊಳ್ಮುಳುಗಿ ನಿಜ ನಿವಾಸಿಗಳಾಗಿರಿ
ನಮ್ಮ ಗುರುನಿರಂಜನ ಚನ್ನಬಸವಲಿಂಗ ಮೆಚ್ಚುವಂತೆ.
Art
Manuscript
Music
Courtesy:
Transliteration
Haramunidare gurukāyuva
gurumunidare harakāyanemba
mahāvākyavanu kēḷi kaṇḍarida hr̥dayavu
durāgniyinde nāśavāyitte?
Chī adētara bāḷuve.
Guruva maredu liṅgavanolisuvenendare
endigū āgabāradu.
Chī gurumārgavē mārga,
chī gurujñānavē jñāna,
chī guru pariṇāmavē pariṇāma.
Adu kāraṇa jaḍamūḍha prāṇigaḷirā,
karkasamathana kaḍaloḷu muḷugi hōguvadakintave
gurukr̥pāmbudhiyoḷmuḷugi nija nivāsigaḷāgiri
nam'ma guruniran̄jana cannabasavaliṅga meccuvante.
ಸ್ಥಲ -
ಭಕ್ತಿತಾಮಸ ನಿರಸನಸ್ಥಲದ
ಉಳಿದ ವಚನಗಳು