Index   ವಚನ - 976    Search  
 
ಗುರುವು ಲಿಂಗವಹನ್ನಬರ ಕಾಯಕದಲ್ಲಿ ವಂಚನೆಯನುಳುಹಿದರೆ ಆ ಕಾಯ ಕಿಲ್ಬಿಷಕೂಪಕ್ಕಾಹುತಿಯೆಂಬುದು ಶಿವನ ವಾಕ್ಯ. ವಾಚಕದಲ್ಲಿ ವಂಚನೆಯನುಳುಹಿದರೆ ಆ ವಾಚಕ ನಿರಯಬಾಧೆಯಧ್ವನಿಯೆಂಬುದು ಶಿವನ ವಾಕ್ಯ. ಮಾನಸದಲ್ಲಿ ವಂಚನೆಯನುಳುಹಿದರೆ ಆ ಮಾನಸ ಯಮದೂತರ ಕೋಪಾಹುತಿಯ ಅನಾನಂದದಾಲಯವೆಂಬುದು ಶಿವನ ವಾಕ್ಯ. ಅದುಕಾರಣ, ಆ ಕರಣತ್ರಯವು ದುರ್ವೋಚ್ಫಿಷ್ಟವಾಗಿ ಬಿದ್ದು ಹೋದ ಪ್ರಾಣಿಗಳನು ನೋಡಲಾಗದು ಮಾತಾಡಲಾಗದು ಸುಜ್ಞಾನಿ ಕ್ರಿಯಾಸಂಬಂಧಿಗಳು ಗುರುನಿರಂಜನ ಚನ್ನಬಸವಲಿಂಗ ಸಾಕ್ಷಿಯಾಗಿ.