Index   ವಚನ - 979    Search  
 
ಹೊರಗೊಳಗೆ ಹಿತವೆನಿಸುವ ತಾಯಿ ತಂದೆಗಳು ನೀರುಕೂಳನಿಕ್ಕಿ ಸಂಸಾರವಿಷಯ ತೋರಿ ಭವಕ್ಕೀಡುಮಾಡುವರು. ಇಂತಲ್ಲ ನೋಡಾ ಎನ್ನ ಗುರುವರನು. ಕ್ರಿಯಾಜ್ಞಾನವಾಗಿ ಹೊರಗೊಳಗೆ ಹಿತವೆನಿಸಿ, ಪಾದೋದಕ ಪ್ರಸಾದವನಿಕ್ಕಿ ಸಂಪತ್ತಿನ ಸಾರಾಯಾನುಭಾವವ ತೋರಿ, ಗುರುನಿರಂಜನ ಚನ್ನಬಸವಲಿಂಗಕ್ಕೀಡುಮಾಡಿ ಎತ್ತಿಕೊಂಬುವನು ಕಾಣಾ.