ಕೋಪ ಮರವೆಗಳಿಂದೊಗೆದ ಕುರುಹಿಂಗೆ
ಬಾಹ್ಯಬಾಧೆಯನು ತೊಡೆದವರುಂಟು.
ಲೋಕದೊಳಗೆ ಜನನಸಂಗಬಾಧೆಯನು
ತೊಡೆದವರಾರು ಹೇಳಾ?
ಮೋಹ ಮರವೆಗಳಿಂದೊಗೆದ ಕುರುಹಿಂಗೆ
ಬಾಹ್ಯಬಾಧೆಯನು ತೊಡೆದವರುಂಟು;
ಇಳೆಯೊಳಗೆ ತಾಪಸ್ಥಿತಿಸಂಗಬಾಧೆಯನು
ತೊಡೆದವರಾರು ಹೇಳಾ?
ಮರವೆಗಳಿಂದೊಗೆದ ಕುರುಹಿಂಗೆ
ಬಾಹ್ಯಬಾಧೆಯನು ತೊಡೆದವರುಂಟು;
ಜಗದೊಳಗೆ ಮರಣಸಂಗಬಾಧೆಯನು
ತೊಡೆದವರಾರು ಹೇಳಾ?
ಅಶನವ್ಯಸನವಿತ್ತುಗಳಿಂದೆ ಹಿರಿಯರೆನಿಸಬಹುದು,
ಲೋಕದೊಳಗೆ ಕ್ರಿಯಾಜ್ಞಾನೈಶ್ವರ್ಯಗಳಿಂದೆ
ಹಿರಿಯರೆನಿಸುವರಾರು ಹೇಳಾ,
ಗುರುನಿರಂಜನ ಚನ್ನಬಸವಲಿಂಗವೆಂಬ
ಸದ್ಗುರುನಾಥನಲ್ಲದೆ.
Art
Manuscript
Music
Courtesy:
Transliteration
Kōpa maravegaḷindogeda kuruhiṅge
bāhyabādheyanu toḍedavaruṇṭu.
Lōkadoḷage jananasaṅgabādheyanu
toḍedavarāru hēḷā?
Mōha maravegaḷindogeda kuruhiṅge
bāhyabādheyanu toḍedavaruṇṭu;
iḷeyoḷage tāpasthitisaṅgabādheyanu
toḍedavarāru hēḷā?
Maravegaḷindogeda kuruhiṅge
bāhyabādheyanu toḍedavaruṇṭu;
jagadoḷage maraṇasaṅgabādheyanu
toḍedavarāru hēḷā?
Aśanavyasanavittugaḷinde hiriyarenisabahudu,
lōkadoḷage kriyājñānaiśvaryagaḷinde
hiriyarenisuvarāru hēḷā,
guruniran̄jana cannabasavaliṅgavemba
sadgurunāthanallade.
ಸ್ಥಲ -
ಭಕ್ತಿತಾಮಸ ನಿರಸನಸ್ಥಲದ
ಉಳಿದ ವಚನಗಳು