Index   ವಚನ - 992    Search  
 
ಎಂಟರೊಳಗೆ ಬಂದವರು ಸುಂಟುಮಾಡಿ ಬದುಕಿಹೋದವರೊಳರೆ? ಅವರೊಳಗಿನ ಸಕಲಸಂಜನಿತರು ಎಂಟರೊಳಬಂದವರು ಸುಂಟುಮಾಡಿ ಬದುಕಿಹೋದವರೊಳರೆ? ಇವರೊಳಗಿನ ಸಕಲಸಂಜನಿತರು ಮತ್ತೆ ಅವರಂತು ಇವರಿಂತು ಸಮಗಂಡ ನಿಲುವೇ ಆಚಾರಂಗ ಗುರುನಿರಂಜನ ಚನ್ನಬಸವಲಿಂಗ.