ಸಾಗರದೊಳಗೊಂದು ಉಲುಹಿಲ್ಲದ ವೃಕ್ಷವು
ಬೇರಿಲ್ಲದ ಕುಸುಮ ಕಾತು ವಾಸನೆಯಿಲ್ಲದ
ಗಂಧ ಸೂಸದಿಪ್ಪದು ನೋಡಾ.
ಐವತ್ತಾರುದೇಶದೊಳಗೆ ಆ ಸುದ್ದಿಯ ನರರು ಸುರರು
ಮುನಿಗಳೆಲ್ಲ ಕೇಳಿ ಕಂಡವರಾದಲ್ಲಿ
ಇವರು ಅಜನಕೊಂದವರಹುದು? ಅಲ್ಲ.
ಇವರು ಹರಿಯಕೊಂದವರಹುದು? ಅಲ್ಲ.
ಇವರು ರುದ್ರನ ಕೊಂದವರಹುದು? ಅಲ್ಲ.
ಮತ್ತೆ ಇವರೊಂದಾಗಿ ವೃಕ್ಷದೊಳಹೊರಗೆ
ಗುರುನಿರಂಜನ
ಚನ್ನಬಸವಲಿಂಗವನಾರಾಧಿಸುತಿರ್ದರು.