Index   ವಚನ - 1014    Search  
 
ನಡೆದವರ ನುಡಿಯ ಕಲಿತು ತುಡುಗುಣಿ ತಾನೊಂದು ಲಿಂಗವಹಿಡಿದು ನಡೆವ ಮನಬಂದಂತೆ, ನುಡಿವ ಜಿಹ್ವೆ ಶುಷ್ಕವಹನ್ನಕ್ಕರ, ಹಿಡಿವ ಕರಣೇಂದ್ರಿಯ ವಿಷಯದಿಚ್ಫೆಗೆ ಸೋಲ್ತು. ಮತ್ತೆ ಗುರುಲಿಂಗಜಂಗಮವನಿದಿರಿಡದ ಪರಿಣಾಮಿಯೆಂದರೆ ಆ ಬಾಯಲ್ಲಿ ಸುರಿಯವೆ ಬಾಲ್ಹುಳಗಳು? ಈ ವಾಕ್ಪಟುಪ್ರಾಣಿಯನು ಬಿಟ್ಟು ಕಳೆವುದು ಗುರುನಿರಂಜನ ಚನ್ನಬಸವಲಿಂಗದ ನವೀನ ಚರಿತೆಯ ತೋರದೆ.