Index   ವಚನ - 1018    Search  
 
ಈ ತನುವುಳ್ಳವರನಾ ತನುವುಳ್ಳವರು ಹೋಲಬಲ್ಲರೆ? ಈ ಮನವುಳ್ಳವರನಾ ಮನವುಳ್ಳವರು ಹೋಲಬಲ್ಲರೆ? ಈ ಪ್ರಾಣವುಳ್ಳವರನಾ ಪ್ರಾಣವುಳ್ಳವರು ಹೋಲಬಲ್ಲರೆ? ಈ ಭಾವವುಳ್ಳವರನಾ ಭಾವವುಳ್ಳವರು ಹೋಲಬಲ್ಲರೆ? ಇದು ಕಾರಣ, ಈ ಸಿಂಹ ಗಜವನಾ ಶುನಕ ಸೂಕರ ಹೋಲಬಲ್ಲವೇನು? ಗುರುನಿರಂಜನ ಚನ್ನಬಸವಲಿಂಗಾ ಈ ಶರಣನಾ ನರನು ಹೋಲಬಲ್ಲನೆ?