Index   ವಚನ - 1017    Search  
 
ಅನೃತ ಅಸ್ಥಿರವಾಕ್ಯವನುಳ್ಳ ನಾಲಿಗೆ, ವಂಚನೆ ಪಂಕ್ತಿಭೇದವನುಳ್ಳ ಮನ, ಉದಾಸೀನ ನಿರ್ದಯವುಳ್ಳ ತನುವು - ಈ ನುಡಿ ಮನವಂಗ ಸ್ವಯವಾಗಿ, ನಾನು ಸತ್ಯವ್ರತಸಂಬಂಧಿಯೆಂದು ಸುಟ್ಟನಾಲಿಗೆಯಲ್ಲುಸುರುವ ಭ್ರಷ್ಟ ಭವಿಗೆ ಕಷ್ಟಕಡೆಗಾಣಬಾರದು ನಿರವಯದಲ್ಲಿ. ಅದು ಕಾರಣ, ನಿಷ್ಠೆನಿರ್ಮಲರು ತರಲಾಗದು ತಮ್ಮ ನುಡಿಯೊಳಗಿಕ್ಕಿ ಆ ಪಾತಕರ ಗುರುನಿರಂಜನ ಚನ್ನಬಸವಲಿಂಗ ಸಾಕ್ಷಿಯಾಗಿ.