Index   ವಚನ - 1027    Search  
 
ಅವರ್ಣದಾಗಿಂಗೆ ವರ್ಣದಪರಿವಿಡಿಯಿಂದೆ ಅರಿಯಲುಂಟೆ? ರೂಪಿಂಗೆ ರೂಪಲ್ಲದೆ ಸಯವಲ್ಲ, ನಿರೂಪಿಂಗೆ ನಿರೂಪವೇ ಸಯವಯ್ಯಾ. ಕಾಣಬಾರದುದ ಕಂಡುಹಿಡಿವರಾರು ನೋಡಾ ಮೂರುಲೋಕದೊಳಗೆ? ಮಾರಾರಿ ಮಹಿಮರು ನಿಮ್ಮ ಶರಣರಿಗಲ್ಲದೆ ಅರಿಯಬಾರದು, ಗುರುನಿರಂಜನ ಚನ್ನಬಸವಲಿಂಗವನು, ಕುರುಹಳಿದು ಕಾಣಾ.