ಶ್ವಾನ ಬೊಗಳುವುದೇ ಸುಳುಹುಕಾಣದೆ?
ಅಳಿದುಳಿದು ಗುರುವಿನಿಂದುದಿಸಿಬಂದೆವೆಂದು ನುಡಿದು
ಬಂದ ಬಳಿಕ ನುಡಿನಡೆಯೊಳೊಪ್ಪಿ ಕಾಣಿಸಿಕೊಳ್ಳಬೇಕಲ್ಲದೆ
ತಮದ ಮರೆಯಲ್ಲಿ ಮಡುಗಿ ಇತರರ ಗುಣವನರಸಿ ತಂದು ಆಡುವರು.
ಅದಲ್ಲದೆ ಕಾಣದೆ ಕಂಡೆವೆಂದು ಹುಸಿ ನೇವರಿಸಿ ನುಡಿವ ಕಸಮೂಳರ ಕೆಡಹಿ
ಬಸುರಲ್ಲಿ ಮಲವ ತುಂಬುವರು ಕಾಲನವರು.
ಈ ಶ್ವಾನನ ಬೊಗಳಿಕೆಗೆ ಕಡೆಯಾದ ಕರ್ಮಿಗಳ ನೆನೆಯಲಾಗದು
ಕಾಲತ್ರಯದಲ್ಲಿ ಕಂಡ ಮಹಿಮರು
ಗುರುನಿರಂಜನ ಚನ್ನಬಸವಲಿಂಗ ಸಾಕ್ಷಿಯಾಗಿ.
Art
Manuscript
Music
Courtesy:
Transliteration
Śvāna bogaḷuvudē suḷuhukāṇade?
Aḷiduḷidu guruvinindudisibandevendu nuḍidu
banda baḷika nuḍinaḍeyoḷoppi kāṇisikoḷḷabēkallade
tamada mareyalli maḍugi itarara guṇavanarasi tandu āḍuvaru.
Adallade kāṇade kaṇḍevendu husi nēvarisi nuḍiva kasamūḷara keḍahi
basuralli malava tumbuvaru kālanavaru.
Ī śvānana bogaḷikege kaḍeyāda karmigaḷa neneyalāgadu
kālatrayadalli kaṇḍa mahimaru
guruniran̄jana cannabasavaliṅga sākṣiyāgi.
ಸ್ಥಲ -
ಶರಣಸ್ಥಲದ
ಉಳಿದ ವಚನಗಳು