Index   ವಚನ - 1029    Search  
 
ಬಚ್ಚಲದ ತಂಪಿನಲ್ಲಿ ಬಿದ್ದು ಸುಖಿಸುವ ಸೂಕರ ಸುಗಂಧಪಂಕದ ಸುಸೌಖ್ಯವ ಸುಖಿಸಲೇನು ಬಲ್ಲುದು ಹೇಳಾ. ಮಲತ್ರಯದ ಗೊಜ್ಜಿನ ತಂಪುಗೊಂಡ ಮಾನವ ಲಿಂಗತ್ರಯವೆರೆದ ಸುಖಾನುಭಾವದ್ವಾಸನೆಯೆಂಬ ಪರಮಶಾಂತ ಪರಿಣಾಮವನವನೆತ್ತ ಬಲ್ಲ ಹೇಳಾ. ಅರಿದವರರಿಯಬಾರದು ಗುರುನಿರಂಜನ ಚನ್ನಬಸವಲಿಂಗ ನಿಮ್ಮನು.