Index   ವಚನ - 1048    Search  
 
ಕಲ್ಲೊಳಗಣ ಬೆಂಕಿ ಕಾರ್ಯವನುಳಿದು ಕಾಣದು, ಕಾಷ್ಠದೊಳಗಿನ ಬೆಂಕಿ ಸೋಂಕದರಿಯದು, ಬೀಜದೊಳಗಣ ಕುರುಹು ಜಲ ಮೃತ್ತಿಕೆಯನುಳಿದು ತೋರದು. ಅದು ಕಾರಣ, ಶರಣನೊಳಗಣ ನುಡಿ ತನ್ನ ಅನುನುಡಿಗಳನುಳಿದು ತೋರದು, ಗುರುನಿರಂಜನ ಚನ್ನಬಸವಲಿಂಗದಲ್ಲಿ ಶಬ್ದಸೂತಕಿಯಲ್ಲದ ಕಾರಣ.