ಮೂರು ಸುತ್ತಿನಕೋಟೆಯ ನಟ್ಟನಡುಮಧ್ಯ
ಸಡಗರದ ಮನೆಯೊಳಗಿಪ್ಪನೊಬ್ಬ ಶಿವಯೋಗಿ.
ಆ ಶಿವಯೋಗಿ ಮೊದಲ ಗಂಡನ ಸಂಭೋಗಸವಿಯಲ್ಲಿ
ಬಂದನೆನ್ನ ಕಣ್ಣ ಮುಂದೆ.
ಮೊದಲ ಗಂಡನಕೊಂದು ಅವಗೆ ಮಡದಿಯಾದುದು
ಮೂರುಲೋಕವೆಲ್ಲ ಬಲ್ಲುದು ನೋಡಾ.
ಹಲವು ಬಗೆಯಿಂದೆ ಹಲವು ಗಂಡರ ಸಂಗವ
ನಲಿನಲಿದು ಮಾಡಿದರೆ ಗೆಲುವಾಯಿತ್ತು ಎನ್ನ ಗಂಡಂಗೆ.
ನಿತ್ಯ ಮುತ್ತೈದೆ ನಿಜವಾದೆ ಗುರುನಿರಂಜನ
ಚನ್ನಬಸವಲಿಂಗದಲ್ಲಿ.