Index   ವಚನ - 1052    Search  
 
ನಿರಂಜನ ನಿತ್ಯಾನಂದ ಶರಣ ತಾನು ರಂಜನೆಯ ರಮ್ಯಭಾವಿಯಲ್ಲ. ಅದೇಕೆಂದಡೆ, ಮುತ್ತಿನ ರಾಶಿಯ ಮೇಲಿರ್ದು ಮೃತ್ತಿಕೆಯ ಮಣಿಗೊಳಿಸಿ ಮಾರುವ ಮರುಳನಂತೆ, ತಥ್ಯ ಮಿಥ್ಯ ರೂಪನಲ್ಲ ಗುರುನಿರಂಜನ ಚನ್ನಬಸವಲಿಂಗದಲ್ಲಿ ಭಾಷೆ ಬಲವಂತ.