ಹುಟ್ಟಿದ ಮನೆಯ ನೆಟ್ಟನೆ ಹಿಡಿದೆಯ್ದಬಲ್ಲರೆ ಶರಣ.
ಬಾಳಿ ಬದುಕುವ ಸ್ಥಲವ ಬಿಟ್ಟಳಿಸಿರದಿರಬಲ್ಲರೆ ಶರಣ.
ಹೊಂದಿಹೋಗುವ ಬಯಲವಾಸವ ಸಂದಿಸಿ
ಸ್ವಯಮಾಡಿಕೊಳಬಲ್ಲರೆ ಶರಣ.
ಹುಟ್ಟಿದ ಮನೆಯ ಬಳಸದೆ ನಡೆವ ನಡೆಯ ತುಳಿಯದೆ
ಅಳಿವ ಅಳುಕಿಂಗಾಗದಿರ್ದಡಾತ ಸತ್ಯಶರಣ ಸಹಜ ಕಾಣಾ
ಗುರುನಿರಂಜನ ಚನ್ನಬಸವಲಿಂಗಾ.
Art
Manuscript
Music
Courtesy:
Transliteration
Huṭṭida maneya neṭṭane hiḍideydaballare śaraṇa.
Bāḷi badukuva sthalava biṭṭaḷisiradiraballare śaraṇa.
Hondihōguva bayalavāsava sandisi
svayamāḍikoḷaballare śaraṇa.
Huṭṭida maneya baḷasade naḍeva naḍeya tuḷiyade
aḷiva aḷukiṅgāgadirdaḍāta satyaśaraṇa sahaja kāṇā
guruniran̄jana cannabasavaliṅgā.
ಸ್ಥಲ -
ಶರಣಸ್ಥಲದ
ಉಳಿದ ವಚನಗಳು