Index   ವಚನ - 1062    Search  
 
ಅಯ್ಯಾ, ನಿಮ್ಮ ಶರಣಂಗೆ ಜ್ಞಾನಿಯೆಂಬರೆ ತಾಮಸವಿಲ್ಲ, ತಾಮಸಿಯೆಂಬರೆ ಜ್ಞಾನವಿಲ್ಲ. ಜ್ಞಾನಾಜ್ಞಾನದ ಕುರುಹರಿಯದ ನಿರಂಜನನ ನಿಲುವು ಅರಿಯಬೇಕೆಂಬರಿಗಸಾಧ್ಯ ; ಅರಿಸಿಕೊಂಬರಿಗೆ ಅನುಮಾನ, ಅರಿದೆನೆಂಬರಿಗೆ ಅತ್ತತ್ತಲಾ ಗುರುನಿರಂಜನ ಚನ್ನಬಸವಲಿಂಗದಂಗವಾಗಿರ್ದು ನಿಜಾನಂದ.