ಕಾಷ್ಠದಿಂದುದಿಸಿದ ಪಾವಕ ತನ್ನೊಳಗೆ
ಕಾಷ್ಠದ ಕುರುಹ ತೋರಿಸಿಕೊಳ್ಳದು ನೋಡಾ.
ಜಲದಿಂದೆ ಜನಿಸಿದ ತಾವರೆಯು ತನ್ನ ಮೇಲೆ
ಪೂರ್ವವ ಕಾಣಿಸಿಕೊಳ್ಳದು ನೋಡಾ.
ಪ್ರಾಣಾಂಗದಿಂದೆ ತೋರಿದ ಲಿಂಗಶರಣನು
ಹಿಂದಣ ಪ್ರಾಣಪ್ರಕೃತಿಯ ಒಡಲೊಳಗರಸ,
ತನುಪ್ರಕೃತಿಯ ತಲೆಯಲ್ಲಿ ತೋರ,
ತೋರಿದರೆ ಸ್ಥಲಕ್ಕೆ ಅಸಂಬಂಧ.
ಅರಿವುದು ತ್ರಿವಿಧದಲ್ಲಿ ಗುರುನಿರಂಜನ ಚನ್ನಬಸವಲಿಂಗಕ್ಕೆ
ಅಂಗವಾದೆವೆಂಬ ಅರುಹಿರಿಯರು.
Art
Manuscript
Music
Courtesy:
Transliteration
Kāṣṭhadindudisida pāvaka tannoḷage
kāṣṭhada kuruha tōrisikoḷḷadu nōḍā.
Jaladinde janisida tāvareyu tanna mēle
pūrvava kāṇisikoḷḷadu nōḍā.
Prāṇāṅgadinde tōrida liṅgaśaraṇanu
hindaṇa prāṇaprakr̥tiya oḍaloḷagarasa,
tanuprakr̥tiya taleyalli tōra,
tōridare sthalakke asambandha.
Arivudu trividhadalli guruniran̄jana cannabasavaliṅgakke
aṅgavādevemba aruhiriyaru.
ಸ್ಥಲ -
ಶರಣಸ್ಥಲದ
ಉಳಿದ ವಚನಗಳು