Index   ವಚನ - 1073    Search  
 
ಕಾಲತ್ರಯದ ಕೀಲನರಿದು ಖಂಡಿಸಿ ಕಾಲತ್ರಯ ಲೋಲಮಯನಾದ ಮಹಿಮನು ಕಾಲಕಲ್ಪಿತಭಾವಿಯಲ್ಲ. ಮತ್ತೆ ಕಾಲತ್ರಯದ ಕರ್ಮವನುಳಿದು ಕಾಲತ್ರಯರೂಪ ಕಂಡಯ್ಯಾ. ಇಹಪರವರಿಯದ ಇಹಪರ ಭೋಗಿ ತಾನೇ ಕಂಡಯ್ಯಾ. ನಿರಂತರ ಗುರುನಿರಂಜನ ಚನ್ನಬಸವಲಿಂಗವಾಗಿ ಸತಿಪತಿಭಾವ ಸವೆಯದನ್ನಕ್ಕರ.