Index   ವಚನ - 1078    Search  
 
ಕೋಣಹಣೆಪಟ್ಟಿ ಚಿತ್ರವಕೊಯ್ದು, ವಿಚಿತ್ರದಂಗನೆಯ ನಾಮ ರೂಪು ಕ್ರಿಯವ ತೊಳೆದು, ಬಿಳಿಯಂಬರನುಡಿಸಿ, ತಾಯಿ ತಂದೆಯ ಮದುವೆಯ ಸಂಭ್ರಮದಲ್ಲಿ ತಪ್ಪದೆ ನೆರೆದ ಪರವಶ ಶರಣ. ಅಜ ವಿಷ್ಣು ರುದ್ರರ ಗಜಬಜೆಯನರಿಯದೆ ಸೆರೆವಿಡಿದಿರ್ದ ತನ್ನನುವಿಂಗೆ ಗುರುನಿರಂಜನ ಚನ್ನಬಸವಲಿಂಗಕ್ಕೆ ಹರಿಯದ ಭೋಗ ಹವಣವಾಯಿತ್ತು ಶರಣ ಮುಖದಿಂದೆ.