ಪೂರ್ವಗುಣವನೆಲ್ಲ ಅಳಿದು
ಪುನರ್ಜಾತನಾದ ಬಳಿಕ
ಗುರುವಿನ ಕರಸ್ಥಲದಲ್ಲಿ ಉತ್ಪತ್ತಿ
ಸದ್ಭಕ್ತರಲ್ಲಿ ಸ್ಥಿತಿ, ಲಿಂಗದಲ್ಲಿ ಲಯ.
ಇಂತೀ ನಿರ್ಣಯವನರಿಯದೆ,
ಶೀಲವಂತರ ಶೀಲ ತಪ್ಪಿದಡೆ ಹೇಳಬಹುದೆ?
ಹೇಳಬಾರದು.
ಸೂಳೆ ಮುತ್ತು ಗೊರವಿತಿಯಾದಂತೆ,
ಬಂಟ ಮುತ್ತು ಬಾಗಿಲಕಾಯ್ದಂತೆ,
ನರಿ ಮುತ್ತು ಬಳ್ಳಾದಂತೆ,
ಹಾವು ಮುತ್ತು ಸಿಂಗಿಯಾದಂತೆ!
ಎಲ್ಲ ದೇವರಿಗೆ ಮಸ್ತಕ ಪೂಜೆ
ಜಂಗಮದೇವರಿಗೆ ಪಾದಪೂಜೆ.
ಪಾದೋದಕ ಪ್ರಸಾದವ ಕೊಡುವ ಜಂಗಮದೇವರು,
ಕಂಠಪಾವಡ ಧೂಳಪಾವಡ ಸರ್ವಾಂಗಪಾವಡ
ಶೀಲಸಂಬಂಧವೆಂದಡೆ
ಕೇಸರಿ ಶುನಕನಾದಂತೆ
ಕಾಣಾ ಗುಹೇಶ್ವರಾ.
Transliteration Pūrvaguṇavanella aḷidu
punarjātanāda baḷika
guruvina karasthaladalli utpatti
sadbhaktaralli sthiti, liṅgadalli laya.
Intī nirṇayavanariyade,
śīlavantara śīla tappidaḍe hēḷabahude?
Hēḷabāradu.
Sūḷe muttu goravitiyādante,
baṇṭa muttu bāgilakāydante,
nari muttu baḷḷādante,
hāvu muttu siṅgiyādante!
Ella dēvarige mastaka pūje
jaṅgamadēvarige pādapūje.
Pādōdaka prasādava koḍuva jaṅgamadēvaru,
kaṇṭhapāvaḍa dhūḷapāvaḍa sarvāṅgapāvaḍa
śīlasambandhavendaḍe
kēsari śunakanādante
kāṇā guhēśvarā.
Hindi Translation पूर्व गुण सब मिठे पुनर्जात होने के बाद
गुरु के करस्थल में उत्पत्ति, सद्भक्तों में स्थिति
लिंग में लय, ऐसे निर्णय न जानते;
शीलवंतों के शील चूके तो कह सकते ? मत कहना।
वेश्या बुडापे में शरण सति बनी जैसी,
सेवक बुडापे में का दरवाजा पहरा देने जैसे,
सियार फिर बूढ़े सियार बनने जैसे,
सांप बुडापे में सिंगि बनी जैसी,
सब देवों की मस्तक पूजा, जंगम देव की पाद पूजा,
पादोदक प्रसाद देनेवाले जंगम देव,
कंठपावड़ा(वस्त्र), धूलपावड़ा, सर्वांग पावड़ा शील संबंध कहें तो
सिंह श्वान बने जैसे देख गुहेश्वरा।
Translated by: Eswara Sharma M and Govindarao B N