Index   ವಚನ - 1098    Search  
 
ಲೋಕ ಲೌಕಿಕವಿಡಿದು ನಿಂದರೇನು? ಕತ್ತಲ ಬೆಳಗ ಕಾಣುವನಲ್ಲದೆ ಕತ್ತಲೆ ಬೆಳಗಲ್ಲ ನೋಡಾ. ದೇವತೆಗಳ ಮೂವತ್ತುಮೂರು ಕೋಟಿಯ ಕಾಣುವನಲ್ಲದೆ ದೇವತೆಗಳು ಮೂವತ್ತುಮೂರುಕೋಟಿಯಲ್ಲ ನೋಡಾ. ರಾಕ್ಷಸರರುವತ್ತಾರು ಕೋಟಿಯ ಕಾಣುವನಲ್ಲದೆ ರಾಕ್ಷಸರರುವತ್ತಾರು ಕೋಟಿಯಲ್ಲ ನೋಡಾ. ಮುನಿಗಳ ಸಂದೋಹವ ಕಾಣುವನಲ್ಲದೆ, ಮುನಿಗಳ ಸಂದೋಹವಲ್ಲ ನೋಡಾ. ಗುರುನಿರಂಜನ ಚನ್ನಬಸವಲಿಂಗವನು ತೋರದೆ ಕಾಂಬುವನಲ್ಲದೆ ತೋರಿಕೊಂಬುವನಲ್ಲ ನೋಡಾ ಶರಣನು.