Index   ವಚನ - 1101    Search  
 
ನೋಡಿ ಬೇಡಿಕೊಂಡ ಶರಣ, ಬೇಡ ಮರೆದಿರುವುದೇ ಸಹಜ. ತನ್ನ ತನ್ನ ಲೀಲೆಗೆ ಗುರುಲಿಂಗಜಂಗಮವನು ಬೇಡುವ. ಪಾದೋದಕ ಪ್ರಸಾದವ ಅನ್ಯರ ಬೇಡಲಿಲ್ಲ. ತನ್ನನಾರಾಗಲಿ ಬೇಡಲು ಇಲ್ಲೆನಲಿಲ್ಲ. ಇದು ಶರಣಜಂಗಮದಿರವು, ಪರಶಿವನರಿವು, ನಿಜವಾದ ಕುರುಹು. ಈ ಭೇದವನರಿಯದೆ ತನ್ನವಸರಕೆ ಅನ್ಯರ ಬೇಡಿಕೊಂಡು ನಡೆವರೆಲ್ಲ ಗುರುಲಿಂಗಜಂಗಮ ದ್ರೋಹಿಗಳು. ಇದು ಕಾರಣ, ಗುರುನಿರಂಜನ ಚನ್ನಬಸವಲಿಂಗಕ್ಕೆ ದೂರವಾಗಿ ಹೋಗುವರು.